   ಮೂಲದೊಡನೆ ಪರಿಶೀಲಿಸಿ

ಉಷ್ಣವಿಭಜನೆ ಮತ್ತು ಉಷ್ಣವಿಯೋಜನೆ

ಎರಡು ಬಗೆಯ ರಾಸಾಯನಿಕ ಬದಲಾವಣೆಗಳು (ಥರ್ಮಲ್ ಡೀಕಾಂಪೊಸಿಷನ್ ಅಂಡ್ ಥರ್ಮಲ್ ಡಿಸೋಸಿಯೇಷನ್). ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಅದು ವಿಭಜಿಸಿ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡಿದರೆ ಆ ಕ್ರಿಯೆಗೆ ಉಷ್ಣವಿಭಜನೆ ಎಂದು ಹೆಸರು. ಇದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು.

2HgO(2Hg+O2

NH4 NO3(N2O +2H2O

(NH4)2 Cr2O7(N2 +Cr2O3 +4H2O
ಇತ್ಯಾದಿ

ಉಷ್ಣದ ನೆರವಿನಿಂದ ಆಗುವ ಈ ಕ್ರಿಯೆ ವಿಪರ್ಯಾಯವಾಗಬಲ್ಲುದಾದರೆ ಅಂದರೆ ಉತ್ಪನ್ನ ಪದಾರ್ಥಗಳು ಕಡಿಮೆ ಉಷ್ಣದಲ್ಲಿ ಪುನಃ ಸಂಯೋಗ ಹೊಂದಿ ಮೂಲ ಪದಾರ್ಥವನ್ನು ಉತ್ಪತ್ತಿಮಾಡುವುದಾದರೆ ಆ ಕ್ರಿಯೆಗೆ ಉಷ್ಣವಿಯೋಜನೆ ಎಂದು ಹೆಸರು. ಇದಕ್ಕೆ ಕೆಲವು ನಿದರ್ಶನಗಳು(
	
	

ಇತ್ಯಾದಿ
(ಜಿ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ